GK

GK

KPSC EXAM GUIDE

🇮🇳🇮🇳🌺🌺🇮🇳🇮🇳

*ಜಗತ್ತಿನ 10 ದೊಡ್ಡ ದೇಶಗಳು*

ಸೂತ್ರ-------

"RKC AB AB AKS"

R-------ರಷ್ಯಾ

K-------ಕೆನಡಾ

C-------ಚೀನಾ

A-------ಅಮೇರಿಕಾ

B-------ಬ್ರೆಜ್ಜಲ್

A--------ಆಸ್ಟ್ರೇಲಿಯಾ

B---------ಭಾರತ

A----------ಅರ್ಜೆಂಟೈನ

K----------ಕಜಕಿಸ್ತನ

S-----------ಸುಡಾನ


*ಅರಬ್ಬೀ ಸಮುದ್ರಲ್ಲಿ 5 ರಾಜ್ಯಗಳು ಕರವಾಳಿ ತೀರ ಹೊಂದಿವೆ ್ತ*

ಸೂತ್ರ--+-----------

G2 M K2

G----ಗುಜರಾತ

G--------ಗೋವಾ

M-------ಮಹಾರಾಷ್ಟ್ರ

K--------ಕೇರಳ

K--------ಕರ್ನಾಟಕ


*ಬಂಗಾಳಕೊಲ್ಲಿಗೆ ನಾಲ್ಕು ರಾಜ್ಯಗಳು ಕರಾವಳಿ ತೀರ ಹೊಂದಿವೆ*

ಸುತ್ರ-----+++-------

AP OT ನಡಿ

A----------ಆ?ದ್ರಪ್ರದೇಶ

P----------ಪ.ಬಂಗಾಳ

O----------ಒರಿಸ್ಸಾ

T-------+-ತ.ನಾಡು


*ದಕ್ಷಿಣ ಭಾರತದಲ್ಲಿ ಪೂರ್ವಕ್ಕೆ ಹರಿದು ಬಂಗಾಳಕೊಲ್ಲಿ ಸೇರುವ ನದಿಗಳು*

👇👇👇👇

ಸೂತ್ರ---------------🌺

ಪಾಪ ಗೋಕಾಕ ಮಘಮ ಬಿತ್ತು ::::::::::::🌺


ಪಾ------ಪಾಲರ್

ಪ------- ಪೆನ್ನಾರ್

ಗೋ--- ಗೋದಾವರಿ

ಕಾ-------ಕಾವೇರಿ

ಕ--------ಕೃಷ್ಣ 

ಮ-------ಮಲಫ್ರಭಾ

ಘ-------ಘಟಪ್ರಭಾ

ಮ------ಮಹಾನದಿ

ಬೀ------ಭೀಮಾ

ತ್ತು-------ತುಂಗಭದ್ರಾ


*ದಕ್ಷಿಣ ಭಾರತದಲ್ಲಿ ಪಶ್ಚಿಮಕ್ಕೆ ಹರಿದು ಅರಬ್ಬೀ ಸಮುದ್ರ ಸೇರುವ ನದಿಗಳು*


ಸೂತ್ರ-----------🌺

ಸನತ ಮಾ ಕಾಶಪನೆ🌺


ಸ--------- ಸಾಬರಮತಿ

ನ---------ನರ್ಮದಾ

ತ---------ತಪತಿ

ಮಾ-----ಮಾಂಡೋವಿ

ಕಾ------ಕಾಳಿ ನದಿ

ಶ---------ಶರಾವತಿ

ಪ---------ಪರಿಯಾರ್

ನೇ-------- ನೇತ್ರಾವತಿ


*ಕರ್ನಾಟಕದಲ್ಲಿ ಪೂರ್ವಕ್ಕೆ ಹರಿದು ಬಂಗಾಳಕೊಲ್ಲಿ ಸೇರುವ ನದಿಗಳು*

👇👇

ಸೂತ್ರ-------;🌺

ಹೇ ಲಕ್ಷ್ಮಣ ಆ ಕೃಷ್ಣ ಕಾವೇರಿಯ ಮಘ ಹಾರಂಗಿ ತುಂಬಿಸಿದ ನದಿಗಳು:

🌺


ಹೇ------------ಹೇಮಾವತಿ

ಲಕ್ಷ್ಮಣ-------ಲಕ್ಷ್ಮಣತಿರ್ಥ

ಆ--------------ಆರ್ಕಾವತಿ

ಕೃಷ್ಣ -----------ಕೃಷ್ಣ ನದಿ

ಕಾವೇರಿಯ----ಕಾವೇರಿ

ಮ---------------ಮಲಪ್ರಭಾ

ಘ--------------ಘಟಪ್ರಭಾ

ಹಾರಂಗಿ------ಹಾರಂಗಿ

ತುಂ-----------ತುಂಗಭದ್ರಾ

ಬಿ--------------ಭೀಮಾ


*ಕರ್ನಾಟಕದಲ್ಲಿ ಪಶ್ಚಿಮಕ್ಕೆ ಹರಿದು ಅರಬ್ಬಿ ಸಮುದ್ರ ಸೇರುವ ನದಿಗಳು*


👇👇

ಸೂತ್ರ --------


ಶೇನೆಕಾ ವರಬೇಡಿ ಅಘನಾಸಿನಿ ನದಿ ದಾಟಿದಳು


ಶೇ---------ಶರಾವತಿ

ನೆ--+------ನೇತ್ರಾವತಿ

ಕಾ---------ಕಾಳಿ

ವರ-------ವರಹಾನದಿ

ಬೇಡಿ-----ಬೇಡ್ತಿ

ಅಘನಾಸಿಿನಿ--ಅಘನಾಸಿನಿ


🔆🏆🏆🏆🔆

1) ಕೇಂದ್ರೀಯ ಅರಣ್ಯ ಸಂಶೋಧನಾ ಸಂಸ್ಥೆ


ದೆಹ್ರಾದೂನ್.(ಉತ್ತರಖಂಡ)


2) ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ


ದೆಹ್ರಾದೂನ್ 


3) ಹಪ್ಕೈನ್ ಇನ್ಸ್ಟಿಟ್ಯೂಟ್ 


ಮುಂಬೈ.


4) ಭಾರತೀಯ ಕ್ಯಾನ್ಸರ್ ರಿಸರ್ಚ್ ಇನ್ಸ್ಟಿಟ್ಯೂಟ್ 


ಮುಂಬೈ.


5) ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಾಮೆಂಟಲ್ ರಿಸರ್ಚ್  


ಮುಂಬೈ.


6) ತಳಿ ಸಂವರ್ಧನಾ ಸಂಸ್ಥೆ 


ಹಿಸ್ಸಾರ್ (ಹರ್ಯಾಣ).


7) ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ


ಕರ್ನಾಲ್ (ಹರ್ಯಾಣ).


8) ರಾಷ್ಟ್ರೀಯ ಕ್ಷಯರೋಗ ಸಂಸ್ಥೆ 


ಬೆಂಗಳೂರು.


9) ರಾಮನ್ ಸಂಶೋಧನಾ ಕೇಂದ್ರ •


ಬೆಂಗಳೂರು.


10) ನ್ಯಾಶನಲ್ ಏರೊನಾಟಿಕಲ್ ಲ್ಯಾಬರೋಟರಿ 


ಬೆಂಗಳೂರು.


11) ವಲ್ಲಭಭಾಯ್ ಪಟೇಲ್ ಚೆಸ್ಟ್ ಇನ್ಸ್ಟಿಟ್ಯೂಟ್ 


ದೆಹಲಿ.


12) ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೆಬಲ್ ಡಿಸೀಜ್ 


ದೆಹಲಿ.


13) ಕೇಂದ್ರೀಯ ರಸ್ತೆ ಸಂಶೋಧನಾ ಸಂಸ್ಥೆ 


ದೆಹಲಿ.


14) ಭಾರತೀಯ ಹವಾಮಾನ ವೀಕ್ಷಣಾಲಯ 


ಪುಣೆ ಮತ್ತು ದೆಹಲಿ.


15) ವೈದ್ಯಕೀಯ ವಿಜ್ಞಾನ ಅಖಿಲ ಭಾರತ ಸಂಸ್ಥೆ (ಏಮ್ಸ್) 


ದೆಹಲಿ.


16) ಅಖಿಲ ಭಾರತ ಮಲೇರಿಯಾ ಸಂಶೋಧನಾ ಸಂಸ್ಥ


ದೆಹಲಿ

17) ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ 


ದೆಹಲಿ.


18) ಕೇಂದ್ರೀಯ ತೆಂಗು ಸಂಶೋಧನಾ ಸಂಸ್ಥೆ 


(ಕಾಸರಗೋಡು) ಕೇರಳ.


19) ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಸಂಸೆ 


ನಾಗ್ಪುರ


20) ಕೇಂದ್ರೀಯ ಇಂಧನ ಸಂಶೋಧನಾ ಸಂಸ್ಥೆ •


ಧನ್ ಬಾದ್.


21) ಆಣ್ವಿಕ ಮತ್ತು ಕೋಶಗಳ ಜೀವವಿಜ್ಞಾನ ಕೇಂದ್ರ


ಹೈದರಾಬಾದ್.


22) ರಾಷ್ಟ್ರೀಯ ಸಸ್ಯವಿಜ್ಞಾನ ಸಂಶೋಧನಾ ಸಂಸ್ಥೆ 


ಲಕ್ನೋ.


23) ಕೇಂದ್ರೀಯ ಔಷಧ ಸಂಶೋಧನಾ ಸಂಸ್ಥೆ 


ಲಕ್ನೋ.


24) ಕೈಗಾರಿಕಾ ಟಾಕ್ಸಿಕಾಲಜಿ ಸಂಶೋಧನಾ ಸಂಸ್ಥೆ


ಲಕ್ನೋ.


25) ಕೇಂದ್ರೀಯ ಔಷಧ ಸಂಶೋಧನಾ ಸಂಸ್ಥ


ಲಕ್ನೋ.


26) ಭಾರತೀಯ ಪಶುವೈದ್ಯ ಸಂಶೋಧನಾ ಸಂಸ್ಥೆ


ರಾಮಗಢ. (ಹಿಮಾಚಲ ಪ್ರದೇಶ), 

ಇಜ್ಜತ್ ನಗರ (ಉತ್ತರ ಪ್ರದೇಶ).


27) ಜವಳಿ ಸಂಶೋಧನಾ ಸಂಸ್ಥೆ  


ಅಹಮದಾಬಾದ್.


28) ರಾಷ್ಟ್ರೀಯ ಉದ್ಯೋಗ ಆರೋಗ್ಯಾ ಸಂಸ್ಥೆ


ಅಹಮದಾಬಾದ್.


29) ಕೇಂದ್ರೀಯ ಆಲೂಗಡ್ಡೆ ಸಂಶೋಧನಾ ಸಂಸ್ಥ


ಶಿಮ್ಲಾ.


30) ಕೇಂದ್ರೀಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ 


ದುರ್ಗಾಪುರ.


31) ಕೇಂದ್ರೀಯ ಕುಷ್ಠರೋಗ ತರಬೇತಿ ಮತ್ತು ಸಂಶೋಧನಾ ಸಂಸ್ಥೆ 


ಚಿಂಗಲ್ ಪೇಟ್. 


32) ರಾಷ್ಟ್ರೀಯ ಶೇಂಗಾ ಸಂಶೋಧನಾ ಸಂಸ್ಥೆ 


ಜುನಾಗಢ್.


34) ಕೇಂದ್ರೀಯ ಚರ್ಮ ಸಂಶೋಧನಾ ಸಂಸ್ಥೆ 


ಚೆನೈ.


35) ಕೇಂದ್ರೀಯ ವಿದ್ಯುತ್-ರಾಸಾಯನಿಕ ಸಂಶೋಧನಾ ಸಂಸ್ಥೆ 


ಕರೈಕುಡಿ.


36) ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ 


ಮೈಸೂರು (ಕರ್ನಾಟಕ).


37) ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ 


ಪುಣೆ (ಮಹಾರಾಷ್ಟ್ರ).


38) ಭಾರತೀಯ ಲ್ಯಾಕ್ ರಿಸರ್ಚ್ ಇನ್ಸ್ಟಿಟ್ಯೂಟ್ 


ರಾಂಚಿ (ಜಾರ್ಖಂಡ್).


39) PGI ವೈಧ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥ


ಚಂಡೀಘಢ


40) ಭಾರತೀಯ ಜೀವ ರಾಸಾಯನಿಕ ಸಂಸ್ಥೆ 


ಕೋಲ್ಕತಾ.


41) ಕೇಂದ್ರೀಯ ಸೆಣಬು ತಾಂತ್ರಿಕ ಸಂಶೋಧನಾ ಸಂಸ್ಥೆ 


(ಬ್ಯಾರಕ್ ಪುರ) ಕೋಲ್ಕತಾ.


42) ಭಾರತೀಯ ಪುರಾತತ್ವ ಇಲಾಖೆ 


ಕೋಲ್ಕತಾ


43) ಸ್ಕೂಲ್ ಆಪ್ ಟ್ರಾಪಿಕಲ್ ಮೆಡಿಸಿನ್ 


ಕೋಲ್ಕತಾ .


44) ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಪ್ ಹೈಜೀನ್ ಆಂಡ್ ಪಬ್ಲಿಕ್ ಹೆಲ್ಥ್ 


ಕೋಲ್ಕತಾ


45) ಸೆಂಟ್ರಲ್ ಗ್ಲಾಸ್ ಅಂಡ್ ಸೆರಾಮಿಕ್

ರಿಸರ್ಚ್ 


ಇನ್ಸ್ಟಿಟ್ಯೂಟ್ ಕೋಲ್ಕತಾ.


46) ರಾಷ್ಟ್ರೀಯ ಭೂಭೌತಶಾಸ್ತ್ರ ಸಂಶೋಧನಾ ಸಂಸ್ಥೆ 


ಹೈದರಾಬಾದ್.


47) ನ್ಯಾಷನಲ್ ಇನ್ಸ್ಟಿಟ್ಯೂಟ್ ಆಪ್ ನ್ಯೂಟ್ರಿಷನ್ 


ಹೈದರಾಬಾದ್.


48) ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ 


ಬೆಂಗಳೂರು.


49) ಉನ್ನತ ಸಂಶೋಧನಾ ಪ್ರಯೋಗಾಲಯ 


ಗುಲ್ಮರ್ಗ್.


50) ಕೇಂದ್ರೀಯ ಗಣಿ ಸಂಶೋಧನಾ ಸಂಸ್ಥೆ 


ಧನ್ಬಾದ್.


51) ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆ


ರೂರ್ಕಿ.


52) ಕೇಂದ್ರೀಯ ವೈಜ್ಞಾನಿಕ ಸಲಕರಣೆಗಳ ಸಂಸ್ಥೆ


ಚಂಡೀಘಢ.


53) ಕೇಂದ್ರೀಯ ಉಪ್ಪು ಮತ್ತು ಸಾಗರ ರಾಸಾಯನಿಕ ಸಂಶೋಧನಾ ಸಂಸ್ಥೆ 


ಭಾವನಗರ್.


54) ಕೇಂದ್ರೀಯ ಭತ್ತ ಸಂಶೋಧನಾ ಸಂಸ್ಥೆ

 

ಕಟಕ್


●.ತೀಸ್ತಾ ನದಿ (Tystha River) — ಬಾಂಗ್ಲಾದೇಶ ಮತ್ತು ಭಾರತದ ನಡುವೆ ತೀಸ್ತಾ ನದಿ ನೀರು ಹಂಚಿಕೆ ವಿವಾದ ಹುಟ್ಟಿಕೊಂಡಿದ್ದು ಹೇಗೆ?


●.ತೀಸ್ತಾ ನದಿ (Tystha River) — ಬಾಂಗ್ಲಾದೇಶ ಮತ್ತು ಭಾರತದ ನಡುವೆ ತೀಸ್ತಾ ನದಿ ನೀರು ಹಂಚಿಕೆ ವಿವಾದ ಹುಟ್ಟಿಕೊಂಡಿದ್ದು ಹೇಗೆ?

━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ

(general studies)


- ಬಾಂಗ್ಲಾದೇಶ ಮತ್ತು ಭಾರತದ ನಡುವೆ ತೀಸ್ತಾ ನದಿ ನೀರು ಹಂಚಿಕೆ ವಿವಾದ ಕಳೆದ 34 ವರ್ಷಗಳಿಂದಲೂ ಬಗೆಹರಿಯದೆ ಉಳಿದಿದೆ. 2011ರಲ್ಲಿ ಡಾ.ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಎರಡೂ ರಾಷ್ಟ್ರಗಳು ಈ ಸಂಬಂಧ ಒಪ್ಪಂದವೊಂದಕ್ಕೆ ಸಹಿಹಾಕಲು ಮುಂದಾಗಿದ್ದವು. ಆದರೆ, ಕೊನೆಕ್ಷಣದಲ್ಲಿ ಮಮತಾ ಬ್ಯಾನರ್ಜಿ ವಿರೋಧದಿಂದ ಒಪ್ಪಂದ ಏರ್ಪಡಲಿಲ್ಲ. ಆದರೆ ಜಲವಿವಾದಕ್ಕೆ ತೆರೆಬೀಳುವ ಮುನ್ಸೂಚನೆಗಳು ಈಗ ಸಿಕ್ಕಿವೆ.


●.ತೀಸ್ತಾ ನದಿಯ ಹುಟ್ಟು :

━━━━━━━━━━━━━━━

ಸಿಕ್ಕಿಂನ ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ತೀಸ್ತಾ ಹುಟ್ಟುತ್ತದೆ. ಖಾಂಗ್ಸೆ ಮತ್ತು ಝೆಮು ಹಿಮನದಿಗಳು ಕರಗಿ ಕಾಂಚನಗಂಗಾದ ಸಮೀಪದಲ್ಲಿರುವ ತ್ಸೋ ಲಾಮೋ ಸರೋವರಕ್ಕೆ ಸೇರುತ್ತವೆ. ಅಲ್ಲಿಂದ ತೀಸ್ತಾ ಹುಟ್ಟಿಕೊಳ್ಳುತ್ತದೆ. ಈ ನದಿಯು ಮುಂದೆ ಡಾರ್ಜಿಲಿಂಗ್​ನ ತೀಸ್ತಾಬಜಾರ್ ಸಮೀಪ ರಂಜೀತ್ ನದಿಯೊಂದಿಗೆ ಸಂಗಮವಾಗಿ ವಿಶಾಲ ರೂಪ ಪಡೆದುಕೊಳ್ಳುತ್ತದೆ. ಆ ಬಳಿಕ ಉತ್ತರ ಬಾಂಗ್ಲಾದ ಕೂಚ್​ಬೆಹಾರ್ ಜಿಲ್ಲೆಯ ಮೆಖ್ಸಿಗುಂಜ್​ನಲ್ಲಿ ಅಂತಾರಾಷ್ಟ್ರೀಯ ಗಡಿ ದಾಟಿ ಬಾಂಗ್ಲಾದೇಶಕ್ಕೆ ಪ್ರವೇಶಿಸಿ ಅಲ್ಲಿ ಬ್ರಹ್ಮಪುತ್ರಾ ನದಿಯೊಂದಿಗೆ ಸಂಗಮ ವಾಗುತ್ತದೆ. ಕೊನೆಗೆ ಬಂಗಾಳ ಕೊಲ್ಲಿಯನ್ನು ಸೇರುತ್ತದೆ.


●.ಗಮನಿಸಬೇಕಾದ ಅಂಶಗಳು :

━━━━━━━━━━━━━━━━━━

- 414 ಕಿಲೋಮೀಟರ್ ತೀಸ್ತಾ ನದಿಯ ಒಟ್ಟು ಉದ್ದ

- ಸಿಕ್ಕಿಂನಲ್ಲಿ 150 ಕಿಮೀ, ಪಶ್ಚಿಮ ಬಂಗಾಳದಲ್ಲಿ 123 ಕಿಮೀ ಮತ್ತು ಬಾಂಗ್ಲಾದಲ್ಲಿ 140 ಕಿಮೀ ನದಿ ಹರಿಯುತ್ತದೆ.

- ಬಾಂಗ್ಲಾದೇಶದಲ್ಲಿ 1 ಕೋಟಿ ಜನರಿಗೆ ಜೀವನಾಧಾರ

- ಬಾಂಗ್ಲಾದ ಶೇ.14ರಷ್ಟು ಕೃಷಿಗೆ ತೀಸ್ತಾ ಅಗತ್ಯ

- ಬಾಂಗ್ಲಾದ 1 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುತ್ತಿದೆ.

- ಪಶ್ಚಿಮ ಬಂಗಾಳದ ಜಲಪೈಗುರಿ ಮತ್ತು ದಕ್ಷಿಣ ದಿನಾಜಪುರಕ್ಕೆ ತೀಸ್ತಾ ನೀರಿನ ಮೂಲ.


●.ಬಾಂಗ್ಲಾ, ಪಶ್ಚಿಮಬಂಗಾಳಕ್ಕೆ ಜೀವನದಿ

━━━━━━━━━━━━━━━━━━━━━━━

ತೀಸ್ತಾ ನದಿ ಅಂದಾಜು 414 ಕಿಲೋಮೀಟರ್​ಗಳಷ್ಟು ದೂರ ಹರಿಯುತ್ತದೆ. ಇದರಲ್ಲಿ 150 ಕಿಲೋಮೀಟರ್ ಸಿಕ್ಕಿಂನಲ್ಲಿ, 123 ಕಿಲೋಮೀಟರ್ ಪಶ್ಚಿಮ ಬಂಗಾಳ ಮತ್ತು 140 ಕಿಲೋಮೀಟರ್​ಗಳಷ್ಟು ಬಾಂಗ್ಲಾದೇಶದಲ್ಲಿ ಹರಿಯುತ್ತದೆ. ತೀಸ್ತಾ ನದಿ ಬಾಂಗ್ಲಾದೇಶದ ಉತ್ತರ ಭಾಗಕ್ಕೆ ನೀರಿನ ಪ್ರಮುಖ ಮೂಲವಾಗಿದೆ. ಬಾಂಗ್ಲಾದ ನಾಲ್ಕನೇ ಅತಿದೊಡ್ಡ ನದಿ ಎಂಬ ಹೆಗ್ಗಳಿಕೆಯೂ ಇದರದ್ದು. ಬಾಂಗ್ಲಾದ 1 ಕೋಟಿ ಜನರಿಗೆ ಜೀವನಾಧಾರವೂ ಈ ತೀಸ್ತಾ. ಶೇ.14ರಷ್ಟು ಕೃಷಿ, ಐದು ಜಿಲ್ಲೆಗಳ 1 ಲಕ್ಷ ಹೆಕ್ಟೇರ್​ನಷ್ಟು ಪ್ರದೇಶಕ್ಕೆ ನೀರಿನ ಮೂಲಕೂಡ ಆಗಿದೆ ಈ ನದಿ. ಹೀಗಾಗಿಯೇ ಬಾಂಗ್ಲಾದೇಶವು ನದಿಯ ಶೇ.50ರಷ್ಟು ನೀರು ತನಗೆ ಸಲ್ಲಬೇಕು ಎಂದು ಪಟ್ಟು ಹಿಡಿದಿದೆ. ಪಶ್ಚಿಮ ಬಂಗಾಳಕ್ಕೂ ತೀಸ್ತಾ ಜೀವನದಿ ಆಗಿದೆ. ಅಲ್ಲಿನ ಜಲಪೈಗುರಿ, ದಕ್ಷಿಣ ದಿನಾಜಪುರ ಮತ್ತು ಡಾರ್ಜಿಲಿಂಗ್​ನಲ್ಲಿನ ಕೃಷಿಗೂ ತೀಸ್ತಾ ಆಧಾರವಾಗಿದೆ.


●.ವಿವಾದದ ಹುಟ್ಟಿಕೊಂಡಿದ್ದು ಹೇಗೆ?

━━━━━━━━━━━━━━━━━━━━━━━

ಪಶ್ಚಿಮ ಬಂಗಾಳದ ಕೃಷಿಕರ ನೀರಾವರಿ ಅಗತ್ಯಗಳನ್ನು ಪೂರೈಸುವ ಸಲುವಾಗಿ 1980ರ ದಶಕದಲ್ಲಿ ತೀಸ್ತಾಗೆ ಅಡ್ಡಲಾಗಿ ಎರಡು ಅಣೆಕಟ್ಟುಗಳನ್ನು ನಿರ್ವಿುಸಲು ರಾಜ್ಯ ಸರ್ಕಾರ ಮುಂದಾಗಿತ್ತು. ಇದಕ್ಕೆ ಬಾಂಗ್ಲಾದೇಶ ತೀವ್ರ ವಿರೋಧ ವ್ಯಕ್ತಪಡಿಸಿತು. ಹೀಗಾಗಿ ಈ ವಿಚಾರದಲ್ಲಿ ಕೇಂದ್ರ ಮಧ್ಯಪ್ರವೇಶಿಸಿತು. ಆಗಿನ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಬಾಂಗ್ಲಾದೇಶದೊಡನೆ ಚರ್ಚೆ ನಡೆಸಿ 1983ರಲ್ಲಿ ಒಪ್ಪಂದವೊಂದನ್ನು ಮಾಡಿಕೊಂಡಿತು. ಅದರಂತೆ ತೀಸ್ತಾ ನದಿಯ ಶೇ. 39ರಷ್ಟು ನೀರು ಭಾರತಕ್ಕೆ ಮತ್ತು ಶೇ.36ರಷ್ಟು ನೀರು ಬಾಂಗ್ಲಾದೇಶಕ್ಕೆ ಎಂದು ಹಂಚಿಕೆ ಮಾಡಲಾಗಿತ್ತು. ಉಳಿದ ಶೇ.25ರಷ್ಟು ನೀರನ್ನು ಹಂಚಿಕೆ ಮಾಡಿರಲಿಲ್ಲ. ಆದಾಗ್ಯೂ, ಈ ಸೂತ್ರ ಹೆಚ್ಚು ಕಾಲ ಉಳಿಯಲಿಲ್ಲ.


●.ಜಲವಿದ್ಯುತ್ ಉತ್ಪಾದನೆಗೆ ತಟ್ಟಲಿದೆ ಬಿಸಿ

━━━━━━━━━━━━━━━━━━━━━━━

ತೀಸ್ತಾ ನದಿ ಜಲವಿದ್ಯುತ್​ನ ಮೂಲವೂ ಹೌದು. ಭಾರತದಲ್ಲಿ ತೀಸ್ತಾ ನದಿಯನ್ನು ಆಧರಿಸಿ 26 ಜಲವಿದ್ಯುತ್ ಯೋಜನೆಗಳನ್ನು ಸಿದ್ಧಪಡಿಸಲಾಗಿದ್ದು, ಈ ಪೈಕಿ ಹೆಚ್ಚಿನ ಯೋಜನೆಗಳು ಸಿಕ್ಕಿಂನಲ್ಲಿ ಸ್ಥಾಪಿತವಾಗಿವೆ. ಇವುಗಳ ಮೂಲಕ 50,000 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ಬಾಂಗ್ಲಾದೇಶಕ್ಕೆ ನೀರು ಹಂಚಿಕೆ ಮಾಡಬೇಕಾದದ್ದೇ ಆದಲ್ಲಿ ಈ ಯೋಜನೆಗಳಿಗೆ ಅಡ್ಡಿಯಾಗಲಿದೆ.

Report Page